ಸಾಕ್ಷಾತ್ಕಾರದ ಹಾದಿಯಲ್ಲಿ..

Part-1

ನಾನು ಆಂಡ್ ನನ್ನ ಊರು

ನನ್ನೂರು ಒಂದು ಸಣ್ಣ ಹಳ್ಳಿ. ಪೇಟೆ ಇಂದ ಒಂದು 7 ರಿಂದ 8 ಕಿಲೋಮೀಟರ್ ಇರಬಹುದು. ಆ ಸಣ್ಣ ಹಳ್ಳಿಯಲ್ಲಿ ಅಬ್ಬಬ್ಬ ಅಂದ್ರೆ 10 ಮನೆ ಇರಬಹುದೇನೋ. ಬಡವರಿಂದ ಇಡಿದು ಒಂದು ಲೆವೆಲ್ ಶ್ರೀಮಂತರವರೆಗೂ, ಮೈ ಬಗ್ಗಿಸಿ ಬೆವರು ಸುರಿಸಿ ದುಡಿಯುವ ಹೈಕ್ಳು ಇಂದ ಇಡೀ ದಿನ ತಿಂದು ಮಲಗೋ ಸೋಂಬೆರಿಗಳ ತನಕ, ಚಿಕ್ಕ ಚಿಕ್ಕ ಬೆಥ್ಲೆ ಮಕ್ಕಳಿಂದ ಇಡಿಧೂ ಕಡುದ್ರೇ ಊರಿಗೆ ತುಂಬಾ ಅನ್ನ ಹಾಕೋ ಥರ ಇರೋರಿಂದ ಇವತ್ಥೋ ನಾಳೆನೋ ಅನ್ನೋ ಮುದಿ ಜೀವದವರೆಗೆ ತರೇಹೇವಾರಿ ಪ್ರಜೆಗಳಿಂದ ತುಂಬಿದ್ದ ಸುಂದರವಾದ ಹಳ್ಳಿ ಅದು.

ಹಳ್ಳಿಗೆ ತಕ್ಕಂತೆ ಒಂದು ಸರಕಾರಿ ಶಾಲೆ, ಶಾಲೆಗೆ ನಾಲ್ಕು ಮೇಸ್ಟ್ರು, ದಿನಕ್ಕೆ 5-6 ಗಂಟೆ ಕರೆಂಟು, ಹಳ್ಳಿಗೆ ಒಂದು ಕೆರೆ, ಭಯ ಭಕ್ತಿಗೆ 3 ದೇವಸ್ತಾನ, ಹಾಲಿಗೆ ಹಸು, ಮೇವಿಗೆ ಗದ್ದೆ, ದುಡಿಮೆಗೆ ಕಾಫಿ ತೋಟ, ಟೈಂ ಪಾಸ್ ಗೆ ಒಂದು ಅಡ್ಡ. ಹಳ್ಳಿ ಅಂತ ಕರೆಯಿಸಿಕೊಳ್ಳೋಕೆ ಏನೇನ್ ಬೇಕೋ ಎಲ್ಲಾ ಇತ್ತು ಆ ಊರಲ್ಲಿ.

ಒಂದೋ ಎರಡೋ ಮನೇಲಿ ಕಪ್ಪು-ಬಿಳಿ ಟಿವಿ, ಟಿವಿ ಲಿ ದೂರಧರ್ಶನ, ಗುರುವಾರ ಚಿತ್ರ ಮಂಜರಿ, ರವಿವಾರ ಸಿನೆಮಾ. ಬೇಗ ಬೇಗ ತಮ್ಮ ಎಲ್ಲಾ ಕೆಲ್ಸ ಮುಗ್ಸಿ ಪಕ್ಕದ ಮನೆ ಟಿವಿ ಮುಂದೆ ಕೂರೊ ಅಮ್ಮ, ಅಪ್ಪ, ಅಜ್ಜಿ, ತಾತ, ಮಕ್ಳು ಆಂಟಿ, ಅಂಕಲ್, ಕೈಲಿ ಬಿಸಿ ಬಿಸಿ ಕಾಫಿ, ತಟ್ಟೇಲಿ ಮೆಣಸಿನಕಾಯಿ ಬಜ್ಜಿ..ಆಹಾ..!! ಲೋಕದ ಪರಿವೆ ಇಲ್ಲದೆ ಲೈಫ್ ನ ಎಂಜಾಯ್ ಮಾಡೋದು ಅಂದ್ರೆ ಅದೇ ಇರಬೇಕು..!
7.15 ರ ಹದಿನೈದು ನಿಮಿಷದ ವಾರ್ತೆಗಳು, 9 ಗಂಟೆಗೆ ಬಸ್ಸಿನಲ್ಲಿ ಬರೋ ನ್ಯೂಸ್ ಪೇಪರ್, ಬುದ್ಧಿ ಜೀವಿಗಳು ಅಂಡ್ ನಂಗೆ ಗೊತ್ತು ಅನ್ಕೊಂಡಿರೊರ ಬಡಾಯಿ ನ್ಯೂಸ್, ಬುದ್ಧಿ ಜೀವಿಗಳ ವಿಚಾರ, ವದಂತಿಗಳೇ ನನ್ನ ಹಳ್ಳಿಗರ ಆ ದಿನದ ಪ್ರಪಂಚ ಜ್ಞಾನ.
ತನ್ನದೇ ಗದ್ದೆಯಲ್ಲಿ ಬೆಳೆದ ಅಕ್ಕಿ/ಅನ್ನ, ಮನೆ ಹಿಂದೆ ಅಪ್ಪ ಬೆಳೆದ ತರಕಾರಿ, ಅಲ್ಲೆಲ್ಲೋ ತಾನೇ ಬೆಳೆದು ನಮಗಾಗಿ ಕಾದು ಕುಳಿತ ಕಾಡು ಸೊಪ್ಪು, ನಾಯಿ ಟೊಮೊಟೊ, ಮಣ್ಣು ಇಟ್ಟಿಗೆ ಒಲೆ, ಒಲೆಗೆ ತೋಟದಲ್ಲಿ ಸಿಗೋ ಕೋಲು ಕಡ್ಡಿ, ಮರದ ತುಂಡು, ಸೊಸೈಟಿಲಿ ಸಿಗೋ ಸೀಮೆಎಣ್ಣೆ, 5 ಕೇಜಿ ಕಸದ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಸಕ್ಕರೆ ಇದೆಲ್ಲಾ ನಮ್ಮನ್ನ ನಾವೇ ಶ್ರೀಮಂತ ಅಂತ ಕರ್ಕೊಳ್ಳೋ ಒಂದು ಸಮಾಧಾನ.
ನೋ ಮೊಬೈಲ್, ನೋ ಇಂಟರ್ನೆಟ್, ಒಂದೆ ಒಂದು ಮನೇಲಿ ಲ್ಯಾಂಡ್ಲೈನ್ ಫೋನ್, 40 ರುಪಾಯಿ ಕರೆಂಟ್ ಬಿಲ್, ದಿನಕ್ಕೆ 2 ಗಂಟೆ ಕುಡಿಯೋ ನೀರು, ಸರಕಾರದ್ದು ಒಂದು ಬೋರ್ವೆಲ್ ಇದೆಲ್ಲಾ ನೋಡಿದ್ರೆ ಆ ದೇವರೆ ಸೃಷ್ಟಿ ಮಾಡಿರೋ ಸ್ವರ್ಗ ಅಂತ ಅನ್ನುಸ್ತ ಇತ್ತು.

ನನ್ನ ಮನೆ ಅಂಡ್ ಕುಟುಂಬ

ನಂಗೆ ನನ್ನ ಅಜ್ಜನ ನೆನಪು ಸ್ವಲ್ಪನೂ ಇಲ್ಲ. ಅಜ್ಜಿ ಹೇಳ್ತಾ ಇದ್ರು ನಾನು ಅರೈವಲ್ ಆದ ತಕ್ಷಣ ನನ್ನಜ್ಜ ಡಿಪಾರ್ಚರ್ ಆದ್ರೂ ಅಂತ. ಸಾಮಾನ್ಯವಾಗಿ ಎಲ್ಲಾ ಹೇಳೋದು ಮೊಮ್ಮಗ ಬಂದ ಅಜ್ಜನ್ ನುಂಗ್ದ ಅಂತ. ಆದ್ರೆ ನನ್ನ ಜೀವನದಲ್ಲಿ ಯಾರು ಈ ತರ ಮಾತನಾಡಿದ್ದು ನಂಗೆ ನೆನಪಿಲ್ಲ. ಅಸ್ಟು ಒಳ್ಳೇ ಫ್ಯಾಮಿಲಿ ಅನ್ಸತ್ತೆ ನಂದು.
ನನ್ನ ಅಜ್ಜ ಅಜ್ಜಿಗೆ ಐದು ಜನ ಮಕ್ಳು. ಮೂರು ಗಂಡು ಎರಡು ಹೆಣ್ಣು. ನನಪ್ಪ ಎರಡನೇಯೋರು ಅಂಡ್ ಮನೆ ಹಿರಿ ಮಗ. ಮೊದಲನೇ ಅಂಡ್ ಮೂರನೆಯವರು ನನ್ನ ಸೋದರತ್ತೆಗಳು. ಇನ್ನ ಇಬ್ರು ನನ್ನ ಅಂಕಲ್ಸ್.
ಈ ಐದು ಜನರಲ್ಲಿ ಅಪ್ಪನೆ ತುಂಬಾ ವಿದ್ಯಾವಂತ. ವಿದ್ಯಾವಂತ ಅಂದ್ರೆ ಏನೋ ಭಯಾನಕ ಓದಿದ್ಧಾರೆ ಅಂತ ಅಲ್ಲ. ಹತ್ತನೇ ಕ್ಲಾಸ್ ಫೇಲ್. ಇನ್ನಾ ಇಬ್ಬರು ಅತ್ತೆಯರು ಏಳನೇ ಕ್ಲಾಸ್ ಪಾಸ್ ಅಂಡ್ ಇನ್ನ ಅಂಕಲ್ಸ್ ದು ಇಲ್ಲೀವರ್ಗು ಗೊತಿಲ್ಲ. ಮೋಸ್ಟ್ಲಿಯಾರು ಇದ್ರು ಬಗ್ಗೆ ಮಾತಾಡಲಿಲ್ಲ ಅನ್ಸತ್ತೆ ಅದಕ್ಕೆ ನಂಗೆ ಗೊತ್ತಿಲ್ಲಾ. ಹಾಗಂತ ನನ್ನ ಫ್ಯಾಮಿಲಿ ಓದೀರೋದು ಇಸ್ಟೇಯ ಅನ್ಎಜುಕೇಟೆಡ್ ಫ್ಯಾಮಿಲಿ ಅನ್ಕೋಬೇಡಿ. ಒಬ್ರೋ ಇಬ್ರೋ ಬಿಟ್ಟು ಇಡೀ ಊರೀನ ಪರಿಸ್ಥಿತಿ
ಇದೇ ಆಗಿತ್ತು. ಸೋ ಆ ಕಾಲಕ್ಕೆ ನನ್ ಫ್ಯಾಮಿಲಿ ಒಂಥರ ಎಜುಕೇಟೆಡ್ ಫ್ಯಾಮಿಲಿ ನೇ.
ನಂಗೆ ನೆನಪೀರೊ ಹಾಗೇ ಕೊನೆ ಅಂಕಲ್ ನ ಬಿಟ್ಟು ಎಲ್ಲಾರ್ಗು ಮದುವೆ ಆಗಿತ್ತು. ಎಲ್ಲಾರ್ಗು ಇಬ್ರು ಮಕ್ಳು. ನನ್ನ ಅಪ್ಪ ಅಮ್ಮನಿಗೂ ಕೂಡ ಇಬ್ರು, ನಾನು ಅಂಡ್ ನನ್ನ ತಮ್ಮ.
ಇಬ್ರು ಸೋದರತ್ತೆಯರು ಒಳ್ಳೆ ಕುಟುಂಬದಲ್ಲಿ ಸೆಟ್ಲ್ ಆಗಿದ್ರು. ನನ್ನ ಇಬ್ರು ಸೋದರ ಮಾವಂದಿರು ಜೀವನದಲ್ಲಿ ತುಂಬ ಕಷ್ಟ ಪಟ್ಟು ಅವರವರ ಊರಿನಲ್ಲಿ ಒಂದು ಒಳ್ಳೇ ಹೆಸರು ಮಾಡಿದ್ರು. ಇಬ್ಬರೂ ಇನ್ನೋಬರ ಕಷ್ಟದಲ್ಲಿ ಸಹಾಯ ಮಾಡೋ ಆಗೇ ಇದ್ರು. ಹಣಕಾಸಿನ ವಿಚಾರದಲ್ಲೂ ಅಂಡ್ ಮನಸ್ಸಿನ ವಿಚಾರದಲ್ಲೂ.
ನಂದು ಕಡು ಬಡತನದ ಕುಟುಂಬ ಅಂತ ಹೇಳಿದ್ರೆ ಮೋಸ್ಟಲಿ ತಪ್ಪಾಗಲ್ಲ್ಲಅನ್ಸತ್ತೆ. ತಾತ ಬಿಟ್ಟೋದ್ ಒಂದುವರೆ ಎಕ್ಕರೆ ಕಾಫಿ ತೋಟ ಬಿಟ್ರೆ ನಮ್ದು ಅಂತ ಹೆಳ್ಕೊಳ್ಳೋಕೇ ಸ್ವಂತ ಮನೆ ಕೂಡ ಇರ್ಲಿಲ್ಲ. ನಾವು ಇದ್ದಿದ್ದು ಯಾರದೋ ಒಂದು ಸಣ್ಣ ಮನೆಯಲ್ಲಿ.

………ಮುಂದುವರೆಯುವುದು

haddhaiyaar…✍️✍️

Leave a comment

This site uses Akismet to reduce spam. Learn how your comment data is processed.