ನಿಮ್ ಹಣೆಬರಹ..ಅನುಭವಿಸಿ..🤦🤦

ಹೀಗೆ ನಮ್ಮ ಭಾಷೆ, ನಮ್ಮ ನೆಲ, ಜಲ ಅಂದ್ರೆ ನನಗೆ ಸ್ವಲ್ಪ ಅಭಿಮಾನ ಜಾಸ್ತಿ. ಹೀಗಾಗಿ ನನ್ನ ಕಾಲೇಜ್ ಗೆಳೆಯ ಒಬ್ಬ ಕನ್ನಡಿಗರ ಭಳಗ ಅಂತ ಯಾವುದೊ ಗ್ರೊಪ್ಗೆ ನಂಗೆ ತಿಳಿಸದೇನೇ ಜಾಯಿನ್ ಮಾಡಬಿಟ್ಟಿದ್ದ.. ಹೊಗತ್ತಲಗೀ ಕನ್ನಡದ ಗ್ರೂಪ್ ಅಲ್ವ ಅಂತ ಎಕ್ಸಿಟ್ ಆಗ್ದೆ ಗ್ರೂಪ್ನಲ್ಲಿ ಇದ್ದೆ. ಹೀಗೆ ಗ್ರೊಪ್ನಲಿದ್ದ ಯಾರೊ ಒಬ್ಬ ನನ್ನ ಪರ್ಸನಲ್ ನಂಬರ್ಗೆ ಈ ರೀತಿ ಮೆಸೇಜ್ ಒಂದನ್ನ ಹರಿ ಬಿಟ್ಟ…

“ಹುಟ್ಟಿದ್ದು ಹಿಂದೂವಾಗಿ, ಸಾಯುವುದು ಹಿಂದೂವಾಗೇ. ಮತ್ತೆ ಜನ್ಮ ತಾಳುವಂತಿದ್ದರೆ ಮತ್ತದೇ ಹಿಂದೂ ಧರ್ಮದಲ್ಲೇ. ವಂದೇ ಮಾತರಂ”.

ನಾನು ‘No problem, you carry on’ ಎಂದು ರಿಪ್ಲೈ ಮಾಡಿ ಸುಮ್ಮನಾದೆ.

‘ಸಾರ್, ನೀವು ಹಿಂದೂವಾಗಿ ನಮ್ಗೆ ಸಪೋರ್ಟ್ ಮಾಡೋಲ್ವಾ… ಹಿಂದೂಗಳು ನಾವೆಲ್ಲ ಒಂದಾಗ್ಬೇಕು ಅಲ್ವಾ ಸಾರ್?’ ಮತ್ತೆ ಮೆಸೇಜ್ ಬಂತು.

ಅವನನ್ನು ಬ್ಲಾಕ್ ಮಾಡಿ ಸುಮ್ಮನಾದೆ..

ಹಿಂದೂಗಳು ಯಾಕೆ ಒಂದಾಗ್ಬೇಕು? ಯಾರ ವಿರುದ್ಧ ಒಂದಾಗ್ಬೇಕು? ಒಂದಾಗಿ ಏನಾಗ್ಬೇಕು? ಒಂದಾಗಿ ಏನು ಮಾಡ್ಬೇಕು…? ಎಂದು ವಾಪಸ್ಸು ಕೇಳಿದರೆ ಸಮರ್ಪಕ ಉತ್ತರ ಯಾರಿಂದಲೂ ಸಿಗೋದಿಲ್ಲ. ಮತ್ತದೇ ಕಾಶ್ಮೀರ, ಮತ್ತದೇ ಗುಡಿಗುಂಡಾರ, ಮತ್ತದೇ ಬಾಬ್ರಿ, ಮತ್ತದೇ ದಾದ್ರಿಯ ಬಗ್ಗೆ ಇನ್ನೂ ಸಾವಿರ ವರ್ಷ ಚರ್ಚೆಗಳನ್ನ ಮಾಡ್ತಾರೆ…ಮಡ್ತಾನೇ ಇರುತ್ತಾರೆ…..ಇವು ದೇಶವೊಂದರ ಆಂತರಿಕ ವಿಷಯಗಳು.. ರಾಜಕಾರಣಕ್ಕೆ ಮುಖ್ಯವಾಗಿ ಸಂಬಂಧಪಟ್ಟ ದಾಳಗಳು.. ಸಾರ್ವಜನಿಕವಾಗಿ ಚರ್ಚೆಗಳಾಗಲಿ. ಪರವಿರೋಧಗಳಾಗಲಿ.. ಇದಕ್ಕ್ಯಾರು ಬೇಡ ಅನ್ನೋದಿಲ್ಲ. ಆದರೆ, ತೀರಾ ವೈಯುಕ್ತಿಕವಾಗಿ ನಮ್ಮ ಮನೆಯ ಅಂಗಳದಲ್ಲಿ ಬಿಟ್ಟುಕೊಳ್ಳುವಂತಹ ವಿಚಾರಗಳೇನಲ್ಲ..! ಇವುಗಳ ಬಗ್ಗೆ ಭಾವನಾತ್ಮಕವಾಗಿ ಯೋಚಿಸುವ ಅವಶ್ಯಕತೆಯೂ ನಮಗಿಲ್ಲ. ಆದ್ರೆ, ಈ ತಲೆಮಾಸದ ಹುಡುಗರಿಗೆ ಇಂತಾದ್ದನ್ನೆಲ್ಲಾ ಯಾರು ಹೇಳಿ ಕೊಡ್ತಾರೋ ಒಂದೂ ಅರ್ಥ ಆಗಲ್ಲ ನಂಗೆ. ನಾವಿಲ್ಲಿ ಒಂದು ವಿಷ್ಯ ತಿಳ್ಕೊಬೇಕು ಮತ್ತು ಅರ್ಥ ಮಾಡ್ಕೋಬೇಕು. ‘ಧರ್ಮ-ಕರ್ಮಗಳನ್ನು ಬಿಟ್ಟು ಮುಂದೆ ನಡೆಯುವವರು ನಡೆದೇ ಇರುತ್ತಾರೆ. ಕಾಲ ಬದಲಾಗಿದೆ, ಕಾಲದೊಂದಿಗೆ ಬದುಕು ಬದಲಾಗಿದೆ, ಬದುಕುವ ಪರಿಕಲ್ಪನೆಗಳು ಬದಲಾಗಿವೆ. ಈಗ ಮನುಷ್ಯ ಪ್ರೊಗ್ರೆಸ್ಸಿವ್ ಆಗಿ ಯೋಚ್ನೆ ಮಾಡ್ಬೇಕು.. ದೇಶ ದೇಶದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು…ಪ್ರೊಗ್ರೆಸ್ಸಿವ್ ಅಲ್ಲದ ಮನುಷ್ಯನ ತಲೆ-ಮೆದುಳೆಲ್ಲ ಕೊಳೆತು ಹೋಗ್ತವೆ… ಜಗತ್ತು ನಮ್ಮೆಲ್ಲರನ್ನೂ ಹಿಂದೆ ಸರಿಸಿ ಮುಂದೆ ಸಾಗಿದೆ… ಸಾಗುತ್ತಲೇ ಇದೆ. ನನ್ನ ಅಕ್ಕ-ಪಕ್ಕದ ದೇಶಗಳು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಮುಂದೋಡುತ್ತಿವೆ… ನಾವು ಅದ ನೋಡುತ್ತ ನಮ್ಮನ್ನೇ ನಾವು ಬೈದು ಕೊಳ್ಳುತ್ತಾ ಕೈ ಹಿಸುಕಿಕೊಂಡು ಇದೀವಿ ಅಷ್ಟೇ…. ಸಮಯದ ವೇಗಕ್ಕೆ ಸರಿಸಮನಾಗಿ ಹೆಜ್ಜೆ ಹಾಕಬೇಕು ನಾವು. ಇದು ನೆನಪಿನಲ್ಲಿರ್ಬೇಕು ನಮ್ಗೆ…’

ಇದು ಬರೀ ಕೇವಲ ಒಂದು ಜಾತಿ, ಧರ್ಮದ ಹುಡುಗರಿಗೆ ಅಷ್ಟೇ ಅಲ್ಲ. ಜಾತಿ-ಧರ್ಮ ಮತಾಂಧತೆಯನ್ನು ತಲೆಗಚ್ಚಿಕೊಂಡು, ಅವಿವೇಕಿ ನಾಯಕರನ್ನು ಆದರ್ಶವಾಗಿಟ್ಟುಕೊಂಡ ಎಲ್ಲರಿಗೂ ಅನ್ವಯವಾಗುತ್ತದೆ.

ಅರ್ಥ ಮಾಡಿಕೊಂಡು ಮುಂದೆ ನಡೆದರೆ ಉತ್ತಮ… ಇಲ್ಲಾ ಅಂದ್ರೆ ……..

ನಿಮ್ ಹಣೆಬರಹ..ಅನುಭವಿಸಿ..

haddhaiyaar..✍️✍️

7 Comments

  1. Hindugalu yake ondagabeku anta gottaglikke innu swalpa varsha kayabeku aste 😁 alla yella hindugalu seri 1 2 makkalanna katti samsara madtiddruu namma deshada janasankye kadime yakaglilla anta shivane balla.. religious bigot thara comment madidakke block Madi 🤘 parwagilla.
    But you are politically uneducated boi. Saku Indira la secularism 🙏

    Liked by 1 person

    1. ಗೆಳೆಯ ನಿನ್ನ ಮನಸ್ಸಿನ ತಳಮಳ ಅರ್ಥ ಆಗುತ್ತೆ…. ಧನ್ಯವಾದಗಳು

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.